ಶುಕ್ರವಾರ, ಏಪ್ರಿಲ್ 2, 2010

ನೇಸರ...

ಊರಿನಾಚೆ ಏರಿಮ್ಯಾಗೆ..
ಮನದ ಮುಗಿಲ ತೇರಿನಾಗೆ..
ಮೂಡಿಬರುತಾವ್ನೆ ಕೆಂಪು ನೆಸರ
ಎಷ್ಟು ಸುಂದರ... ಆಹಾ... ಊರೆಲ್ಲಾ ಹಾಗೈತಿ ಕೆಂಪು ಮಂದಿರ...

ಗಿಡದಾಗೆ ಹೂ ಬೀರಿದು ದುಂಬಿಯನ್ನು ಬಳಿ ಕರೆದು
ಗಾಳಿಯಲ್ಲಿ ಸೂಸ್ಯಾವೆ ಕಂಪು ಪರಿಮಳ
ಹಕ್ಕಿಯೆಲ್ಲಾ ಹಾಡುತಿವೆ ಇಂಪು ಇಂಚರ
ಬಾನಾಗೆ ಮೂಡಿಸ್ಯಾವೆ ಚಿತ್ತಾರ
ಆಹ್ಹಾ ಎಂಥ ಸುಂದರ.. ಮೂಡಿಬರುತಾವ್ನೆ ಮೇಲೆ ನೇಸರ...

ಮುತ್ತೈದೆ ಬಿಂದುವಾಗಿ ಹೆಣ್ಣಿಗೆ ವರ
ಕತ್ತಲೆಲ್ಲಾ ತೋಯ್ಯಿತಿರಲು ಜಗಕ್ಕೆ ವರ
ಗಿಡಮರದ ಎಲೆಯಲ್ಲಾ ಉಸಿರಿಂದ ಹಸಿರಾಗಿ
ನೆನೆಯುತಿರಲು ಬಂದ ನೆಸರ..ಅಹ್ಹಾ ಏಷ್ಟು ಸುಂದರ...

ಜಗಕ್ಕೆಲ್ಲಾ ರವಿಯಾಗಿ...
ಕವಿಗಳಿಗೆ ಸ್ಪೂರ್ತಿಯಾಗಿ..
ಜೀವ ಸಂಕುಲಕ್ಕೆ ವರವಾಗಿ....
ಬಂದ ನೇಸರ... ಅಹ್ಹಾ ಏಷ್ಟು ಸುಂದರ......

ಶುಕ್ರವಾರ, ಮಾರ್ಚ್ 12, 2010

ಹನಿಯೊಂದು....

ಕಣ್ಣಲ್ಲಿ ಹನಿಯೊಂದು ಮಡುಗಟ್ಟಿ..
ಕೇಳುತ್ತಿದೆ ನನ್ನ ನಾ ಬಂದದ್ದು.. ದುಃಖಕ್ಕೊ... ಸುಖಕ್ಕೊ...
ಅದಕ್ಕೆ ಉತ್ತರಿಸಲಾಗದೆ........
ನಾ ಕಣ್ಮುಚ್ಚಿ ಬಿಡುವಷ್ಟರಲ್ಲಿ.....
ಬತ್ತಿತು ಹನಿ ತಿಳಿಯದೆ ಏನಗೆ........