ಊರಿನಾಚೆ ಏರಿಮ್ಯಾಗೆ..
ಮನದ ಮುಗಿಲ ತೇರಿನಾಗೆ..
ಮೂಡಿಬರುತಾವ್ನೆ ಕೆಂಪು ನೆಸರ
ಎಷ್ಟು ಸುಂದರ... ಆಹಾ... ಊರೆಲ್ಲಾ ಹಾಗೈತಿ ಕೆಂಪು ಮಂದಿರ...
ಗಿಡದಾಗೆ ಹೂ ಬೀರಿದು ದುಂಬಿಯನ್ನು ಬಳಿ ಕರೆದು
ಗಾಳಿಯಲ್ಲಿ ಸೂಸ್ಯಾವೆ ಕಂಪು ಪರಿಮಳ
ಹಕ್ಕಿಯೆಲ್ಲಾ ಹಾಡುತಿವೆ ಇಂಪು ಇಂಚರ
ಬಾನಾಗೆ ಮೂಡಿಸ್ಯಾವೆ ಚಿತ್ತಾರ
ಆಹ್ಹಾ ಎಂಥ ಸುಂದರ.. ಮೂಡಿಬರುತಾವ್ನೆ ಮೇಲೆ ನೇಸರ...
ಮುತ್ತೈದೆ ಬಿಂದುವಾಗಿ ಹೆಣ್ಣಿಗೆ ವರ
ಕತ್ತಲೆಲ್ಲಾ ತೋಯ್ಯಿತಿರಲು ಜಗಕ್ಕೆ ವರ
ಗಿಡಮರದ ಎಲೆಯಲ್ಲಾ ಉಸಿರಿಂದ ಹಸಿರಾಗಿ
ನೆನೆಯುತಿರಲು ಬಂದ ನೆಸರ..ಅಹ್ಹಾ ಏಷ್ಟು ಸುಂದರ...
ಜಗಕ್ಕೆಲ್ಲಾ ರವಿಯಾಗಿ...
ಕವಿಗಳಿಗೆ ಸ್ಪೂರ್ತಿಯಾಗಿ..
ಜೀವ ಸಂಕುಲಕ್ಕೆ ವರವಾಗಿ....
ಬಂದ ನೇಸರ... ಅಹ್ಹಾ ಏಷ್ಟು ಸುಂದರ......
ಶುಕ್ರವಾರ, ಏಪ್ರಿಲ್ 2, 2010
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ